ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ನಿಧನ
ನವದೆಹಲಿ: ಅಸ್ಸಾಂ ರಾಜ್ಯದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ (84) ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಇಂದು ಸಂಜೆ ನಿಧನ ಹೊಂದಿದರು. ಕಾಂಗ್ರೆಸ್ ಮುಖಂಡರು ಆಗಿರುವ ಗೊಗೋಯಿ ಅವರು ನವೆಂಬರ್ 2ರಿಂದ ಗುಹಾಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಎರಡು ತಿಂಗಳ ಚಿಕಿತ್ಸೆ ಬಳಿಕ ಕೊರೊನಾದಿಂದ ಚೇತರಿಸಿಕೊಂಡಿದ್ದ ತರುಣ್ ಗೊಗೊಯಿ ಅವರು ಅಕ್ಟೋಬರ್ 25ರಂದು ಬಿಡುಗಡೆಯಾಗಿದ್ದರು. ಆದರೆ ಕೊರೊನಾ ಬಳಿಕದ ಸಮಸ್ಯೆಗಳಿಗೀಡಾಗಿದ್ದ ತರುಣ್ ಗೊಗೊಯಿ ಅವರು ನ. 2ರಂದು […]