SAFF ಚಾಂಪಿಯನ್‌ಶಿಪ್: 5-4 ಅಂತರದಿಂದ ಕುವೈಟ್ ಅನ್ನು ಸೋಲಿಸಿ 9 ನೇ ಬಾರಿ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಭಾರತೀಯ ಫುಟ್ ಬಾಲ್ ತಂಡ!!
ನವದೆಹಲಿ: ನಿಗದಿತ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ಬಳಿಕ ಪೆನಾಲ್ಟಿ ಶೂಟ್ ನಲ್ಲಿ ಭಾರತ ಫುಟ್ ಬಾಲ ತಂಡವು 5-4 ಅಂತರದಿಂದ ಕುವೈಟ್ ತಂಡವನ್ನು ಸೋಲಿಸಿ ದಾಖಲೆಯ 9 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ಮತ್ತು ಕುವೈಟ್ ನ ಸಮಬಲದ ಸೆಣಸಾಟದಲ್ಲಿ ಪಂದ್ಯದ ಕೊನೆಯಲ್ಲಿ ಇತ್ತಂಡಗಳು ಸಮಬಲದ ಸ್ಕೋರ್ ಗಳಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ, ಉದಾಂತ ಸಿಂಗ್ ಭಾರತದ ಒಂದು ಪೆನಾಲ್ಟಿಯನ್ನು ತಪ್ಪಿಸಿಕೊಂಡರು ಮತ್ತು ಅಬ್ದುಲ್ಲಾ ಕುವೈಟ್ ಗೆ ಒಂದು ಅಂಕ ಗಳಿಸಿಕೊಡುವಲ್ಲಿ ಯಶಸ್ವಿಯಾದರು. […]
ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ: ಶ್ರೀ ವೆಂಕಟರಮಣ ಕಾಲೇಜಿನ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡವು ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.