ಉಡುಪಿಗೆ ವರುಣಾಘಾತ: ನದಿಪಾತ್ರದ ಪ್ರದೇಶಗಳು ಮುಳುಗಡೆ

ಉಡುಪಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ಉಡುಪಿ ಜಿಲ್ಲೆಯ ನದಿಪಾತ್ರದ ಪ್ರದೇಶಗಳು, ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಸ್ವರ್ಣೆಯ ಆರ್ಭಟ: ಹಿರಿಯಡಕ, ಪುತ್ತಿಗೆ, ಪೆರಂಪಳ್ಳಿ ಭಾಗದಲ್ಲಿ ಹಾದುಹೋಗುವ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಇದರಿಂದ ನದಿಗೆ ತಾಗಿಕೊಂಡಿರುವ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಕೊಳಲಗಿರಿ, ಹಿರಿಯಡಕ, ಬೆಳ್ಳಂಪಳ್ಳಿ, ಹೆರ್ಗ, ಪರೀಕ ಭಾಗದಲ್ಲಿ ಕೃತಕ ನೆರೆ ಉಂಟಾಗಿದೆ. ಪುತ್ತಿಗೆ ಮಠಕ್ಕೆ ನುಗ್ಗಿದ ನೀರು: ಹಿರಿಯಡಕ ಸಮೀಪದ ಪುತ್ತಿಗೆ ಮೂಲ ಮಳೆ ನೀರು ನುಗ್ಗಿದೆ. ಮಠದ ಗೋಶಾಲೆಯಲ್ಲಿ ನೀರು ತುಂಬಿದ್ದು, […]