ಮಲ್ಪೆ ತೇಲುವ ಸೇತುವೆ ಮುರಿದಿಲ್ಲ; ನಿರ್ವಹಣೆಗಾಗಿ ಸೇತುವೆ ಕಳಚಲಾಗಿದೆ: ನಿರ್ವಾಹಕರಿಂದ ಸ್ಪಷ್ಟನೆ

ಮಲ್ಪೆ: ಮಲ್ಪೆಯ ಫ್ಲೋಟಿಂಗ್ ಬ್ರಿಡ್ಜ್‌ನ್ನು ಎರಡು ತಿಂಗಳಿಗೊಮ್ಮೆ ನಿರ್ವಹಣೆ ಮಾಡುವ ಹಿನ್ನೆಲೆ ಬ್ರಿಡ್ಜ್‌ ಅನ್ನು ತೆರವುಗೊಳಿಸಲಾಗಿದೆ. ಆದರೆ ಫ್ಲೋಟಿಂಗ್ ಬ್ರಿಡ್ಜ್ ಮುರಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಫ್ಲೋಟಿಂಗ್ ಬ್ರಿಡ್ಜ್‌ನ ತಳಭಾಗದಲ್ಲಿ ಕಪ್ಪೆ ಚಿಪ್ಪು ಮೊದಲಾದವುಗಳು ಸೇರಿಕೊಳ್ಳುವುದರಿಂದ ಅದನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನದವರೆಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಸೇತುವೆಯ ನಿರ್ವಹಣೆ ಮತ್ತು ಹವಮಾನ ಇಲಾಖೆಯ ಸೂಚನೆಯ ಹಿನ್ನೆಲೆ ಸೇತುವೆ ತೆಗೆಯಲಾಗಿದೆ ಹೊರತು ಸೇತುವೆ ತುಂಡಾಗಿಲ್ಲ ಎಂದು […]

ಮಲ್ಪೆ ಕಡಲ ತೀರದ ತೇಲುವ ಸೇತುವೆ ಪ್ರವಾಸಿಗರಿಗೆ ಮುಕ್ತ

ಮಲ್ಪೆ: ಇಲ್ಲಿನ ಕಡಲತೀರದಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಭಾನುವಾರದಂದು ಮತ್ತೊಮ್ಮೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಘುಪತಿ ಭಟ್ ಈ ರೀತಿಯ ಸೇತುವೆ ಕೇರಳದಲ್ಲಿ ಮಾತ್ರವಿದ್ದು, ಇದೀಗ ಕರ್ನಾಟಕದ ಮಲ್ಪೆಯೂ ತೇಲುವ ಸೇತುವೆಯನ್ನು ಹೊಂದಲಿದೆ. ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಲಿದೆ ಎಂದರು. ಈ ವರ್ಷದ ಮೇ ತಿಂಗಳಲ್ಲಿ ಸೇತುವೆ ಉದ್ಘಾಟನೆಯಾಗಿದ್ದರೂ ಎರಡೇ ದಿನಗಳಲ್ಲಿ ಮುರಿದು ಬಿದ್ದು ಮಳೆಗಾಲದ ಹಿನ್ನೆಲೆಯಲ್ಲಿ ಕಳಚಿ ಇಡಲಾಗಿತ್ತು. ಆದರೆ ಈ ಬಾರಿ ಕೇರಳ ಮತ್ತು ಕರ್ನಾಟಕದ ತಜ್ಞರ […]

ರಾಜ್ಯದ ಪ್ರಥಮ ತೇಲುವ ಸೇತುವೆ ಶೀಘ್ರದಲ್ಲೇ ಪುನರಾರಂಭ: ತಜ್ಞರ ವರದಿ ಬಳಿಕ ಸಾರ್ವಜನಿಕರಿಗೆ ಮುಕ್ತ

ಮಲ್ಪೆ: ಈ ಹಿಂದೆ ಮಲ್ಪೆ ಬೀಚ್‌ನಲ್ಲಿ ಹೊಸ ತೇಲುವ ಸೇತುವೆಯನ್ನು ಸ್ಥಾಪಿಸಲಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಸೇತುವೆಯನ್ನು ಕಳಚಿಡಲಾಗಿತ್ತು. ಇದೀಗ ತೇಲುವ ಸೇತುವೆಯನ್ನು ಮತ್ತೆ ಸ್ಥಾಪಿಸಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತಮಾಡಲಾಗುವುದು ಎಂದು ವರದಿಯಾಗಿದೆ. ಸೌಲಭ್ಯವು ವೀಕ್ಷಣೆಯಲ್ಲಿದ್ದು, ತಜ್ಞರ ತಂಡವು ತೇಲುವ ಸೇತುವೆಯ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ದೃಢಪಡಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಮಾತನಾಡಿ, ಹಿಂದಿನ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ. ಸೇತುವೆಯನ್ನು ಹೇಗೆ ಸರಿಪಡಿಸುವುದು ಮತ್ತು ಕಳಚುವುದು […]

ಸುರಕ್ಷಿತವಾಗಿದೆ ತೇಲುವ ಸೇತುವೆ: ವಂದತಿಗಳಿಗೆ ಕಿವಿಗೊಡಬೇಡಿ; ಮಲ್ಪೆ ಬೀಚ್ ಗುತ್ತಿಗೆದಾರ ಹೇಳಿಕೆ

ಮಲ್ಪೆ: ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಉಂಟಾಗಿರುವ ಅಲೆಗಳ ಅಬ್ಬರದಿಂದಾಗಿ ಮುಂಜಾಗೃತಾ ಕ್ರಮವಾಗಿ ಮಲ್ಪೆ ಬೀಚ್‍ನಲ್ಲಿ ನೂತನವಾಗಿ ಆರಂಭಗೊಂಡಿರುವ ತೇಲುವ ಸೇತುವೆ ಸೇರಿದಂತೆ ಜಲ ಕ್ರೀಡೆಗಳನ್ನು ಮೂರು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ. ಮಲ್ಪೆ ಬೀಚ್ ನಲ್ಲಿ ಇತ್ತೀಚೆಗೆ ಅರಂಭಗೊಂಡಿರುವ ತೇಲುವ ಸೇತುವ (ಫ್ಲೋಟಿಂಗ್ ಬ್ರಿಡ್ಜ್) ನ ಕುರಿತಾಗಿ ಹಬ್ಬಿರು ವದಂತಿಗಳಿಗೆ ಸ್ಪಷ್ಟನೆ ನೀಡಿ ಪ್ರತಿಕ್ರಿಯೆ ನೀಡಿದ ಅವರು, ಈ ಸೇತುವೆಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸೆಂಟರ್ ಲಾಕ್ ವ್ಯವಸ್ಥೆಯನ್ನು […]

ಗಾಳಿಯ ರಭಸಕ್ಕೆ ಕೊಚ್ಚಿ ಹೋಯಿತು ರಾಜ್ಯದ ಪ್ರಪ್ರಥಮ ತೇಲುವ ಸೇತುವೆ!

ಉಡುಪಿ: ಎರಡು ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡು ರಾಜ್ಯದ ಜನತೆಯ ಗಮನ ಸೆಳೆದಿದ್ದ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಗಾಳಿಯ ರಭಸಕ್ಕೆ ಸಿಕ್ಕು, ಚೂರುಗಳಾಗಿ ಬೇರ್ಪಟ್ಟು, ಸಮುದ್ರದೆಲ್ಲೆಡೆ ತೇಲುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಉದ್ಗಾಟನೆಗೊಂಡ ತೇಲುವ ಸೇತುವೆ ಕೇವಲ ಎರಡೇ ದಿನಗಳಲ್ಲಿ ತುಂಡಾಗಿ ದಿಕ್ಕಾಪಾಲಾಗಿ ತೇಲುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮಲ್ಪೆ ಕಡಲ ತೀರಕ್ಕೆ ಸಾವಿರಾರು ಪ್ರವಾಸಿಗರು ನಿತ್ಯವೂ ಬರುತ್ತಿದ್ದು, ತೇಲುವ ಸೇತುವೆಯು ಆಕರ್ಷಣೆಯ ಕೇಂದ್ರವಾಗಲಿದೆ. ಆದರೆ ಈಗ ಇದು ಮುರಿದ್ದು, ಇದನ್ನು ಸರಿ ಪಡಿಸಲು […]