ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಸಾಗಣೆ: ಬೋಗಿಯಲ್ಲಿ ಹೊತ್ತಿಕೊಂಡ ಬೆಂಕಿ; ಕನಿಷ್ಠ ಎಂಟು ಸಾವು

ಚೆನ್ನೈ: ಇಂದು ಬೆಳಗ್ಗೆ 5:15 ಕ್ಕೆ ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನ ಖಾಸಗಿ/ವೈಯಕ್ತಿಕ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ರೈಲು ಮದುರೈ ಯಾರ್ಡ್‌ನಲ್ಲಿತ್ತು. ಆ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು, ಮತ್ತೊಂದು ಬೋಗಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದುದೇ ಬೆಂಕಿಗೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ. #WATCH | Tamil […]

ಎಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ: 5 ಲಕ್ಷ ರೂ ಮೌಲ್ಯದ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿ

ಪಡುಬಿದ್ರಿ: ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದ ಸುಶೀಲಾ ಗಾಣಿಗ ಅವರ ಗಾಣಿಗರ ಎಣ್ಣೆ ಮಿಲ್ ನಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಸುಮಾರು 5 ಲಕ್ಷ ರೂ ಗಳಿಗಿಂತಲೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿಯಾಗಿ ನಷ್ಟವಾಗಿದೆ. ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿ ಶಾಮಕದಳದವರು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ರಾತ್ರಿ ಮಾಮೂಲಿನಂತೆ […]

ಸಾಣೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ‌; ಗಾಯಾಳು ವೃದ್ಧೆ ಸಾವು

ಕಾರ್ಕಳ: ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸಾಣೂರು ಗ್ರಾಮದ ನಿವಾಸಿ 71 ವರ್ಷದ ಸುಮತಿ ಶೆಟ್ಟಿ ಮೃತ ದುರ್ದೈವಿ. ಇವರು ಏ.4ರಂದು ಬೆಳಿಗ್ಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಓಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಯ ಸೆರಗಿಗೆ ಬೆಂಕಿ ತಗಲಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ […]