ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗೆ ಆರ್ಥಿಕ ನೆರವು ಯಾಚನೆ
ಉಡುಪಿ: ಮಾರಕ ಮೆದುಳಿನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪಡುಬಿದ್ರಿ ಗುಡ್ಡೆಚ್ಚಿಯ ನಿವಾಸಿ ಸುನಂದ ಆಚಾರ್ಯ ಅವರ ಮಗಳಾದ 8 ವರ್ಷದ ತ್ರಿಶಾ ಆಚಾರ್ಯ ಅವರ ಚಿಕಿತ್ಸೆಗೆ ಆರ್ಥಿಕ ನೆರವಿಗಾಗಿ ಸಹಾಯಹಸ್ತ ಚಾಚಿದ್ದಾರೆ. ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ವಿಧಿ ನೀಡಿದ ಪರೀಕ್ಷೆ ಎದುರಿಸಲಾರದೆ ಒದ್ದಾಡುತ್ತಿದ್ದಾರೆ. ತ್ರಿಶಾ ಆಚಾರ್ಯ ಅವರು ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ದೊಡ್ಡ ಮೊತ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಡುಬಡತನದಲ್ಲಿ ಇರುವ ಕುಟುಂಬಕ್ಕೆ ದೊಡ್ಡ […]