ರೈತ ಪ್ರತಿಭಟನೆ: ಕೇಂದ್ರ ಸರ್ಕಾರದಿಂದ ಪಂಚವಾರ್ಷಿಕ ಯೋಜನೆ ಪ್ರಸ್ತಾವ; ಕಾಲಾವಕಾಶ ಬೇಡಿದ ರೈತರು
ಚಂಡೀಗಢ: ಕಳೆದ ವಾರ ಪಂಜಾಬ್-ಹರಿಯಾಣ ಗಡಿಯಲ್ಲಿ ಭಾರೀ ಮುಖಾಮುಖಿಯಾಗಿದ್ದ ಬಿಕ್ಕಟ್ಟಿನಲ್ಲಿ ನಿನ್ನೆ ತಡರಾತ್ರಿ ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರಿ ನಿಯೋಗದ ನಡುವಿನ ನಾಲ್ಕನೇ ಸಭೆಯು ನಡೆದಿದೆ. ಮುಂದಿನ ಐದು ವರ್ಷಗಳವರೆಗೆ ಪಂಜಾಬ್‌ನ ರೈತರಿಂದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಕನಿಷ್ಠ ಸುರಕ್ಷತಾ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮಧ್ಯರಾತ್ರಿಯ ನಂತರ ನಡೆದ ಚಂಡೀಗಢ ಸಭೆಯ ಬಳಿಕ ತಿಳಿಸಿದ್ದಾರೆ. ಪ್ರತಿಭಟನಾನಿರತ ರೈತರು ತಮ್ಮ ವೇದಿಕೆಗಳಲ್ಲಿ […]