ಉಡುಪಿ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟ ಖದೀಮರು
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಹೆಸರಿನಲ್ಲಿ ಯಾರೋ ಖದೀಮರು ನಕಲಿ ಫೇಸ್‌ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ವೈಯಕ್ತಿಕ ಫೇಸ್‌ಬುಕ್ ಖಾತೆಯಾಗಿರುವ ಜಿ. ಜಗದೀಶ್ ಮಲಲಗದ್ದೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಹಲವು ಮಂದಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಲಾಗಿದೆ. ಬಹುತೇಕ ಮಂದಿ ಇವರ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿದ್ದಾರೆ. ಈ ನಕಲಿ ಖಾತೆಯಲ್ಲಿ ಫ್ರೆಂಡ್ಸ್ ಆಗಿರುವವರಿಗೆ ಕಿಡಿಗೇಡಿಗಳು ಸಂದೇಶ ಕಳುಹಿಸಿ ತುರ್ತು ಹಣ […]