ನಕಲಿ ಮದ್ಯ ಸೇವನೆ: 10 ಮಂದಿ ಸಾವು, ಹಲವು ಮಂದಿ ಅಸ್ವಸ್ಥ
ಭೋಪಾಲ್: ನಕಲಿ ಮದ್ಯ ಸೇವಿಸಿ 10 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚುಮಂದಿ ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ಮೊರೋನಾ ಜಿಲ್ಲೆಯ ಮಾನ್ಪುರಿ ಪೃಥ್ವಿ ಮತ್ತು ಪಹಾವಾಲಿ ಗ್ರಾಮಗಳಲ್ಲಿ ಸೋಮವಾರ ಸಂಭವಿಸಿದೆ. ಮನ್ಪುರಿ ಪೃಥ್ವಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಕಲಿ ಮದ್ಯ ಸೇವನೆ ಮಾಡಿದ್ದ ಹಲವರು ಇದ್ದಿಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, 10 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. 10 ಮಂದಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೂವರನ್ನು ಬಂಟಿ, ಜಿತೇಂದ್ರ […]