ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರು ಬದಲಾವಣೆ..!
ವಾಷಿಂಗ್ಟನ್: ಫೇಸ್‌ಬುಕ್‌ನ ಮಾತೃಸಂಸ್ಥೆಯ ಹೆಸರು ‘ಮೆಟಾ’ ಎಂದು ಬದಲಾಗಲಿದೆ. ಫೇಸ್‌ಬುಕ್ ತನ್ನ ಹೆಸರನ್ನು ಸಾಮಾಜಿಕ ಮಾಧ್ಯಮದಿಂದ ದೂರವಿಟ್ಟು ‘ಮೆಟಾವರ್ಸ್’ ಅನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ಹೆಸರನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ. ಫೇಸ್‌ಬುಕ್ ಜಾಲತಾಣದ ಮುಖ್ಯಸ್ಥ ಮಾರ್ಕ್ ಜ್ಯುಕರ್‌ಬರ್ಗ್ ಈ ವಿಷಯ ಪ್ರಕಟಿಸಿದ್ದು, ‘ಮೆಟಾ’ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದು ಹೇಳಿದ್ದಾರೆ. ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ ಎಂದು ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ […]