ಇಂದಿನಿಂದ ಉಡುಪಿ ಕೃಷ್ಣಮಠ ಭಕ್ತರ ಪ್ರವೇಶಕ್ಕೆ ಮುಕ್ತ
ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಭಕ್ತರಿಗೆ ಶ್ರೀಕೃಷ್ಣ ದರ್ಶನ ಪಡೆಯುವ ಅವಕಾಶ ಇಂದಿನಿಂದ ಆರಂಭಗೊಂಡಿತು. ದೇವರ ದರ್ಶನಕ್ಕೆ ಅವಕಾಶ ಕಲ್ಪಿಸುವುದಕ್ಕಾಗಿ ಮಾಡಿದ ವಿಶೇಷ ಪ್ರವೇಶ ದ್ವಾರವನ್ನು ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶ್ರೀಕೃಷ್ಣ ದೇವರ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು. ಇಂದಿನಿಂದ ಭಕ್ತಾದಿಗಳಿಗೆ ನಿಗದಿತ ಸಮಯದಲ್ಲಿ (ಮಧ್ಯಾಹ್ನ 2 ಗಂಟೆಯಿಂದ 5 ರವರೆಗೆ) […]