ಖಾದ್ಯ ತೈಲ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ: ನಾಲ್ಕು ತಿಂಗಳಲ್ಲಿ 15-25ರೂ ಪ್ರತಿ ಲೀಟರ್ ಇಳಿಕೆ

ನವದೆಹಲಿ: ದಿನನಿತ್ಯದ ಅಡುಗೆ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ನಿರುಮ್ಮಳತೆಯನ್ನು ತಂದುಕೊಟ್ಟಿದೆ. ಸರಕಾರದ ಡೇಟಾಗಳ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಯು ಪ್ರತಿ ಲೀಟರಿಗೆ 15-25ರೂ ಗಳಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇಂಡೋನೇಷ್ಯಾವು ಆಗಸ್ಟ್ 31 ರವರೆಗೆ ಎಲ್ಲಾ ತಾಳೆ ಎಣ್ಣೆ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕುವುದರೊಂದಿಗೆ, ಭಾರತದ ಖಾದ್ಯ ತೈಲ ತಯಾರಕರು ಇಳಿಕೆಯಾದ […]