ಕುರಿ, ಕೋಳಿ ಮಾಂಸಕ್ಕಿಂತ ಗೋಮಾಂಸ ಹೆಚ್ಚು ತಿನ್ನಿ ಎಂದ ಬಿಜೆಪಿ ಸಚಿವ!
ಶಿಲ್ಲಾಂಗ್: ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲು ಮುಂದಾಗಿದ್ದರೆ, ಮೇಘಾಲಯದಲ್ಲಿ ಮಾತ್ರ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಬಿಜೆಪಿ ಹಿರಿಯ ನಾಯಕ ಹಾಗೂ ಮೇಘಾಲಯದ ನೂತನ ಪಶು ಸಂಗೋಪನೆ ಮತ್ತು ಪಶುವೈದ್ಯ ಖಾತೆ ಸಚಿವ ಸಣ್ಬೂರ್ ಶುಲ್ಲೈ, ‘ಕುರಿ, ಕೋಳಿ ಮತ್ತು ಮೀನಿನ ಮಾಂಸಕ್ಕಿಂತ ಹೆಚ್ಚು ಗೋವಿನ ಮಾಂಸವನ್ನು ಸೇವಿಸಿ’ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಗೋಮಾಂಸ ಸೇವಿಸಲು ಉತ್ತೇಜಿಸುವ ಮೂಲಕ, ತಮ್ಮ ಸರ್ಕಾರ ಗೋಹತ್ಯೆ ನಿಷೇಧ […]