ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಜ್ರಮಹೋತ್ಸವದ ಅಂಗವಾಗಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪುರ: ವಿದ್ಯೆ ಮತ್ತು ಬುದ್ಧಿ ಒಂದೆ ಗಾಡಿಯ ಎರಡು ಚಕ್ರಗಳಿದ್ದಂತೆ, ಒಂದನ್ನು ಇನ್ನೊಂದು ಅನುಸರಿಸಿ ಸಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಅವರು ಆಗಸ್ಟ್ 13 ರಂದು ಭಂಡಾರ್ಕಾರ್ಸ್ ಕಾಲೇಜಿನ ವಜ್ರಮಹೋತ್ಸವ, ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಡಾ.ಹೆಚ್. ಶಾಂತಾರಾಮ್ ಅವರ 95ನೇ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಒಳಗಿನ ಕಣ್ಣನ್ನು ತೆರೆದು ಯೋಚಿಸಬೇಕು. ಅಹಂಕಾರ ಸಲ್ಲದು. ಮುಖ್ಯವಾಗಿ ತಾಳ್ಮೆ, ಸಕಾರಾತ್ಮಕತೆ ಮತ್ತು ಸ್ವಶಿಸ್ತು ಅತ್ಯಂತ […]