ಧರ್ಮಸ್ಥಳದಲ್ಲಿ ಕುಸಿದ ಸಭಾ ವೇದಿಕೆಯ ಪೆಂಡಲ್: ಸಾವಿರಾರು ಭಕ್ತಾದಿಗಳು ಪ್ರಾಣಾಪಾಯದಿಂದ ಪಾರು ,ಇದೊಂದು ಪವಾಡವೆಂದ ಜನರು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಬೃಹತ್ ತಗಡಿನ ಪೆಂಡಲ್ ಕುಸಿದ ದುರ್ಘಟನೆ  ಗುರುವಾರ ಧರ್ಮಸ್ಥಳದಲ್ಲಿ ನಡೆದಿದೆ. ಆದರೆ ಯಾವುದೇ ರೀತಿಯಲ್ಲಿ ಪ್ರಾಣಾಹಾನಿಯಾಗಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಈ ಪೆಂಡಲ್‌ನ ಕೆಳಗಡೆ ಕುಳಿತು ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದು, ಅವರೆಲ್ಲ ಅಪರಾಹ್ನ ೧.೩೦ರ ಸುಮಾರಿಗೆ ಅನ್ನಪ್ರಸಾದ ಸ್ವೀಕರಿಸಲು ತೆರಳಿದ್ದರು. ಭಕ್ತಾಧಿಗಳು ಪೆಂಡಲ್‌ನಿಂದ ಹೊರಗಡೆ ತೆರಳಿದ ಕೆಲವೇ ನಿಮಿಷದಲ್ಲಿ ತಗಡಿನ ಈ ಪೆಂಡಲ್ ನೆಲಕ್ಕೆ ಕುಸಿದಿದೆ. ಈ ಸಂದರ್ಭ ಕೇವಲ ಬೆರಳೆಣಿಕೆಯ ಮಂದಿ ಮಾತ್ರ ಪೆಂಡಲ್‌ನ  […]