ನ.27 ರಿಂದ 30 ರವರೆಗೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ
ಕಡಬ: ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ 30 ರವರೆಗೆ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ-2022 ಜರುಗಲಿದೆ. ಉತ್ಸವದ ವಿವರಗಳು: ನ.27 ಆದಿತ್ಯವಾರದಂದು ರಾತ್ರಿ ಹೂವಿನ ತೇರಿನ ಉತ್ಸವ, ನ.28 ಸೋಮವಾರದಂದು ರಾತ್ರಿ ಪಂಚಮಿ ರಥೋತ್ಸವ ಮತ್ತು ತೈಲ್ಯಾಭ್ಯಂಜನ, ನ.29 ಮಂಗಳವಾರದಂದು ಚಂಪಾಷಷ್ಠಿ ಮಹಾರಥೋತ್ಸವ, ನ.30 ಬುಧವಾರದಂದು ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ನ. 27 ಮತ್ತು 28 ರಂದು ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಹಾಗೂ ನ.29 ರಂದು ಮಧ್ಯಾಹ್ನ […]
ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ರಚನೆ: ಸಾರ್ವಜನಿಕರಿಂದ ಅರ್ಜಿ ಆಹ್ವಾನ
ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿರುವ ಪ್ರವರ್ಗ-ಬಿ(1) ಮತ್ತು ಸಿ(1) ಅಧಿಸೂಚಿತ ಸಂಸ್ಥೆಗಳಾದ ಉಡುಪಿ ತಾಲೂಕು ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಸಾಮಾನ್ಯ ಒಂದು ಸ್ಥಾನಕ್ಕೆ ಮತ್ತು ಬೈಂದೂರು ತಾಲೂಕು ಹೇರೂರು ಚಿಕ್ತಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತರು ಅರ್ಜಿ ಸಲ್ಲಿಸಲು […]