ಏನಿದು ಕ್ಲೀನ್ ನೋಟ್ ಪಾಲಿಸಿ? 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವಿಕೆ ಕಾರಣ ಹಾಗೂ ನೋಟು ಬದಲಾಯಿಸುವುದು ಹೇಗೆ? ತಿಳಿದುಕೊಳ್ಳಿ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂನ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು,ಇದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. 2016ರ ನವೆಂಬರ್ ತಿಂಗಳಿನಲ್ಲಿ 500 ಮತ್ತು 1,000 ರ ಹಳೆಯ ನೋಟುಗಳನ್ನು ನಿಷೇಧಿಸಿದಾಗ 2,000 ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಇದೀಗ ಆರ್.ಬಿ.ಐ ಈ ನೋಟುಗಳನ್ನು ಹಿಂಪಡೆಯುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಆರ್.ಬಿ.ಐ ಪ್ರಕಾರ, ನೋಟ್ ಬ್ಯಾನ್ ಬಳಿಕ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಂದ ಬಳಿಕ 2018-2019 ರಲ್ಲಿ 2000 ರೂ ನೋಟುಗಳನ್ನು […]