ಉದ್ಯಮಿ ನಡ್ಡೋಡಿ ಮಹಾಬಲ ಶೆಟ್ಟಿ ನಿಧನ

ಕಾರ್ಕಳ: ಉದ್ಯಮಿ, ನಲ್ಲೂರು ನಡ್ಡೋಡಿ ಮಹಾಬಲ ಶೆಟ್ಟಿ (89) ಅಸೌಖ್ಯದಿಂದ ಸ್ವಗೃಹದಲ್ಲಿ ಮೇ 16 ರಂದು ನಿಧನರಾದರು. ಇವರು ನಲ್ಲೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ನಲ್ಲೂರು ಶ್ರೀ ಮಹಾಗಣಪತಿ ಭಜನಾ ಮಂಡಳಿ ಸ್ಥಾಪಕ ಸದಸ್ಯರಾಗಿದ್ದರು. ನಲ್ಲೂರಿನಲ್ಲಿ ಸರಕಾರಿ ಪ್ರೌಢ ಶಾಲೆ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಊರಿನ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರು ಪತ್ನಿ, ಶ್ರೀಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲ ಇಲ್ಲಿನ ಟ್ರಸ್ಟಿ ಭಾಸ್ಕರ ಶೆಟ್ಟಿ ಸಹಿತ ಆರು ಜನ ಪುತ್ರರು ಮತ್ತು […]

ಕಳತ್ತೂರು ಚರ್ಚ್ ರೇ.ಫಾ ಲಾರೆನ್ಸ್ ಬಿ ಡಿಸೋಜ ನಿಧನ: ಸಂತಾಪ ಸೂಚಿಸಿದ ಮಾಜಿ ಸಚಿವ ಸೊರಕೆ

ಕಾಪು : ಕಳತ್ತೂರು ಚರ್ಚಿನ ಧರ್ಮಗುರು ರೇ. ಫಾ.ಲಾರೆನ್ಸ್ ಬಿ ಡಿಸೋಜ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಪಾಲ್ಗೊಂಡು ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಮಾಜ ಸೇವಕ ದಿವಾಕರ ಬಿ ಶೆಟ್ಟಿ ಕಳತ್ತೂರು, ಐರಿನ್ ತಾವ್ರೊ ಕಳತ್ತೂರು, ರಾಜೇಶ್ ಕುಲಾಲ್ ಕುತ್ಯಾರು ಪಾಲ್ಗೊಂಡು ಸಂತಾಪ ಸೂಚಿಸಿದರು.