ದೀಪಾವಳಿ ಪ್ರಯುಕ್ತ ಪ್ಲೇ ಝೋನ್ ನಲ್ಲಿ ಭರ್ಜರಿ ಕೊಡುಗೆ: ಪ್ರತಿ ಮೊಬೈಲ್ ಖರೀದಿಯ ಮೇಲೆ ಖಚಿತ ಉಡುಗೊರೆ

ಉಡುಪಿ: ಇಲ್ಲಿನ ತ್ರಿವೇಣಿ ಸರ್ಕಲ್, ಆದರ್ಶ ಆಸ್ಪತ್ರೆ ಸಮೀಪ ಹಾಗೂ ಕೆ.ಎಸ್.ಆರ್.ಟಿ.ಸಿ. ನರ್ಮ್ ಬಸ್ ನಿಲ್ದಾಣದ ಬಳಿಯ ಪ್ಲೇ ಝೋನ್ ಮೊಬೈಲ್ ಅಂಗಡಿಯಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಜನವರಿ 1 ರವರೆಗೆ ಲಭ್ಯವಿದೆ. ಪ್ರತೀ ತಿಂಗಳು 1 ಟಿ.ವಿ.ಎಸ್ ಜುಪಿಟರ್ ಹಾಗೂ 5 ಎಲ್.ಎ.ಡಿ ಟಿವಿ ಗೆಲ್ಲುವ ಅವಕಾಶ. ಖರೀದಿಯ ಮೇಲೆ ಉಚಿತ ಉಡುಗೊರೆ ಮಾತ್ರವಲ್ಲದೆ 5000ಕ್ಕೂ ಮಿಕ್ಕಿ ಬಹುಮಾನಗಳಿವೆ. ಲಕ್ಕಿ ಡ್ರಾ ನಲ್ಲಿ ಎಲೆಕ್ಟ್ರಿಕ್ ಸೈಕಲ್ ಪಡೆಯುವ ಅವಕಾಶ. ಶೂನ್ಯ […]

ಖಂಡಗ್ರಾಸ ಸೂರ್ಯಗ್ರಹಣ: ದೀಪಾವಳಿ ಹಬ್ಬದ ಧಾರ್ಮಿಕ ವಿಧಿವಿಧಾನಗಳ ವಿವರ

ಉಡುಪಿ: ಈ ಬಾರಿ ದೀಪಾವಳಿಯಂದೇ ಖಂಡಗ್ರಾಸ ಸೂರ್ಯಗ್ರಹಣವಿರುವುದರಿಂದ ಅಂಗಡಿ ಪೂಜೆ ಮುಂತಾದವುಗಳನ್ನು ಸೋಮವಾರದಂದು ಸಂಜೆ ಮಾಡಿದಲ್ಲಿ ಪ್ರಶಸ್ತವಾಗಿರುತ್ತದೆ. ದೀಪಾವಳಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳು: ಅ.23 ಭಾನುವಾರದಂದು ಸಂಜೆ ಗಂಗಾ ಸ್ಮರಣ ಪೂಜಾ, ಜಲಪೂರಣ. ನೀರು ತುಂಬುವುದು. ಅ. 24 ರಂದು ಸೋಮವಾರ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರ ಪೂಜೆ. ಅ. 25 ಮಂಗಳವಾರ ಬೆಳಿಗ್ಗೆ ಗೋಪೂಜೆ; ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸ್ಪರ್ಶ ಕಾಲ: ಸಾಯಂಕಾಲ ಗಂ.5.06 ನಿಮಿಷ; ಗ್ರಹಣ ಮೋಕ್ಷ: ಸಾಯಂಕಾಲ […]

ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆ

ಉಡುಪಿ: ದೀಪಾವಳಿ ಪ್ರಯುಕ್ತ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯನ್ನು ಅ.26 ರಂದು ಬುಧವಾರ ಸಂಜೆ 4 ಗಂಟೆಯಿಂದ ಕಾಪು ಬೀಚ್ ನಲ್ಲಿ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ದೊರೆಯಲಿದೆ. ಮೊದಲನೆ ಬಹುಮಾನ: 11,111ರೂ ಎರಡನೆ ಬಹುಮಾನ: 7,777ರೂ ಮೂರನೆ ಬಹುಮಾನ: 5,555ರೂ ಕಾರ್ಯಕ್ರಮದಲ್ಲಿ ಸುದುಮದ್ದು ಪ್ರದರ್ಶನವಿರಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್ ತಿಳಿಸಿದ್ದಾರೆ. ಸ್ಪರ್ಧೆಯ ನಿಯಮಗಳು: # ಮೂಲೆಗಳಿರುವ ಗೂಡು ದೀಪ ಕಡ್ಡಾಯ # ಬಣ್ಣದ ಕಾಗದ, ಗ್ಲಾಸ್ […]

ದೀಪಾವಳಿಗೆ ಭರ್ಜರಿ ಉಡುಗೊರೆ: 75,000 ಯುವಕರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ಹಸ್ತಾಂತರಿಸಲಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತದ ಸುಮಾರು 75,000 ಯುವಕರು ಮತ್ತು ಅವರ ಕುಟುಂಬಗಳಿಗೆ ದೀಪಾವಳಿಯನ್ನು ವಿಶೇಷವಾಗಿಸಿದ್ದು, ಅಕ್ಟೋಬರ್ 22 ರಂದು ಯುವಕರಿಗೆ ಅವರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಪಟ್ಟಿ ಮಾಡಲಾದ ಯುವಕರಿಗೆ ಪ್ರಧಾನಿ ಮೋದಿ ವರ್ಚುವಲ್ ಕಾರ್ಯಕ್ರಮದ ಮೂಲಕ ನೇಮಕಾತಿ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಯು ಎಲ್ಲಾ ಸಚಿವಾಲಯಗಳಿಗೆ ಆಯಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಪತ್ತೆಹಚ್ಚಲು ಮತ್ತು ನಿಗದಿತ ಸಮಯದಲ್ಲಿ ಭರ್ತಿ ಮಾಡಲು ಹೇಳಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. […]