ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ
ಬೆಂಗಳೂರು: ಹಿರಿತೆರೆ ಮತ್ತು ಕಿರುತೆರೆಯ ಹಿರಿಯ ಕಲಾವಿದೆ ವಿನಯ್ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿರುವುದಾಗಿ ವರದಿಯಾಗಿದೆ. ವಿನಯ್ ಪ್ರಸಾದ್ ಮತ್ತು ಅವರ ಪರಿವಾರದವರು ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರುಮಲಗುವ ಕೋಣೆಯಲ್ಲಿಟ್ಟಿದ್ದ 7 ಸಾವಿರ ರೂಪಾಯಿನಗದು ಎಗರಿಸಿದ್ದಾರೆ. ಇತರ ವಸ್ತುಗಳು ಕಳವಾಗಿರುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದ್ದು, ಕಳ್ಳತನಕ್ಕೆ ಸಂಬಂಧಿಸಿ ನಟಿ ವಿನಯ ಪ್ರಸಾದ್ ರವರು ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಗೆ ತೆರಳಿದ್ದ ವೇಳೆ ಕಳ್ಳತನ ನಟಿ ವಿನಯ್ ಪ್ರಸಾದ್ ಮತ್ತು ಪತಿ ಜ್ಯೋತಿ […]
ಚಿಪ್ಸಿ ಐಟಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಲ್ಲಿ ಅದ್ದೂರಿ ದೀಪಾವಳಿ ಆಚರಣೆ
ಉಡುಪಿ: ಚಿಪ್ಸಿ ಐಟಿ ಸರ್ವಿಸಸ್ ಪ್ರೈ. ಲಿಮಿಟೆಡ್ ನಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಭ್ರಮಾಚರಣೆಯು ಸುಂದರವಾದ ತಂಡ ಬಂಧ ಚಟುವಟಿಕೆಯೊಂದಿಗೆ ಪ್ರಾರಂಭವಾಯಿತು. ಸಿಬ್ಬಂದಿಗಳನ್ನು 4 ತಂಡಗಳಾಗಿ ವಿಂಗಡಿಸಿ ದೀಪಾವಳಿ ಅಲಂಕಾರ ಸ್ಪರ್ಧೆಯನ್ನು ನಡೆಸಲಾಯಿತು. ಪ್ರತಿ ತಂಡಕ್ಕೆ ನಿಗದಿತ ಬಜೆಟ್‌ನೊಳಗೆ ನಮ್ಮ ಕಛೇರಿಯ ಕಾರ್ಯಕ್ಷೇತ್ರದ ಒಂದು ಭಾಗವನ್ನು ಅಲಂಕರಿಸುವ ಕಾರ್ಯವನ್ನು ನಿಯೋಜಿಸಲಾಗಿತ್ತು. ಹೊಟೇಲ್ ವೈಟ್ ಲೋಟಸ್ ಗ್ರೂಪ್‌ನ ಮಾಲಕ ಅಜಯ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಛೇರಿಯ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಉದ್ಯೋಗಿಗಳ ಸೃಜನಾತ್ಮಕತೆ ಹೊರಹೊಮ್ಮಿತು. ಪ್ರತಿಯೊಬ್ಬರೂ […]
ಪೌರ ಕಾರ್ಮಿಕರ ಜೊತೆ ದೀಪಾವಳಿ ಆಚರಿಸಿದ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ
ಉಡುಪಿ: ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿಯ ಬೀಡಿನಗುಡ್ಡೆ ಬಳಿಯ ಪೌರಕಾರ್ಮಿಕ ಕಾಲೋನಿಯ ಸಮಸ್ತರನ್ನು ಅನುಗ್ರಹಿಸಿ ಮನೆಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರೊಂದಿಗೆ ಆಚರಿಸಿದರು.
10 ಡೌನಿಂಗ್ ಸ್ಟ್ರೀಟ್ ನಲ್ಲಿ ದೀಪಾವಳಿ ಆಚರಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಲಂಡನ್: ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ, ಬ್ರಿಟನ್‌ನ ಹೊಸ ಪ್ರಧಾನಿ ರಿಷಿ ಸುನಕ್ ಬುಧವಾರ ರಾತ್ರಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿಯ ಆಚರಣೆಗಳಲ್ಲಿ ಪಾಲ್ಗೊಂಡರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಸುನಕ್, “ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ದೀಪಗಳನ್ನು ಬೆಳಗಿಸುವ ಮತ್ತು ಭವಿಷ್ಯವನ್ನು ಭರವಸೆಯಿಂದ ನೋಡುವಂತಹ ಬ್ರಿಟನ್ ಅನ್ನು ನಿರ್ಮಿಸಲು ಈ ಕೆಲಸದಲ್ಲಿ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ” ಎಂದು ವಾಗ್ದಾನ ಮಾಡಿದರು. ಅವರು ತಮ್ಮ ಅಧಿಕೃತ ನಿವಾಸದಲ್ಲಿ ದೀಪಾವಳಿಯ […]
ನಿಷೇಧ, ದಂಡಕ್ಕೂ ಜಗ್ಗದ ದೆಹಲಿಗರು: ದೀಪಾವಳಿಯಂದು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ
ದೆಹಲಿ: ದೀಪಾವಳಿಯಂದು ಪಟಾಕಿ ಸಿಡಿಸದಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವು ಪಟಾಕಿಗಳ ಮೇಲೆ ನಿಷೇಧ ಹೇರಿದ್ದರೂ ದೆಹಲಿಗರು ಮಾತ್ರ ಇದಕ್ಕೆ ಕ್ಯಾರೇ ಅನ್ನದೆ ಪಟಾಕಿ ಸಿಡಿಸಿ ದೀಪಾವಳಿಯ ಸಂಭ್ರಮವನ್ನು ಆಸ್ವಾದಿಸಿದ್ದಾರೆ. ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹ 200 ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು. ಕಾನೂನು ಪ್ರತಿಬಂಧಕ ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ […]