ಕಾಪು ಮಜೂರು: ಬೆಂಕಿ ಹತ್ತಿಕೊಂಡಿದ್ದ ಶವವೊಂದು ಪತ್ತೆ

ಉಡುಪಿ: ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ಮಜೂರು ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದ ಶವವೊಂದು ಪತ್ತೆಯಾಗಿದ್ದು ಸ್ಥಳಿಯರ ತೀವ್ರ ಆತಂಕಕ್ಕೆ ಕಾರಣವಾಗಿದೆ.   ಬೆಳಿಗ್ಗೆ ೯ ಗಂಟೆಗೆ ಮಜೂರು ರೇಲ್ವೆ ಬ್ರಿಡ್ಜ್ ಪಕ್ಕದ ಪೊದೆಯಲ್ಲಿ ಈ ಶವ ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೋಲಿಸರು ಬೆಂಕಿಯನ್ನು ನಂದಿಸಿದರು. ಆದರೇ ಅದಾಗಲೇ ಗಂಡಸಿನ ಶವ ಗುರತು ಸಿಗದಷ್ಟು ಸುಟ್ಟ ಹೋಗಿತ್ತು. ಶವವನ್ನು ಹೆಚ್ಚಿನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. […]

ಜೋಡಿಕೊಲೆ ಆರೋಪಿಗಳನ್ನು ಗಡಿಪಾರು ಮಾಡಿ: ಶವವಿಟ್ಟು ಪ್ರತಿಭಟನೆ

ಕುಂದಾಪುರ: ಭರತ್ ಹಾಗೂ ಯತೀಶ್ ಮೇಲೆ ತಲವಾರಿನಿಂದ ದಾಳಿ ನಡೆಸಿ ಕೊಲೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪ ಇಬ್ಬರ ಶವವಿಟ್ಟು ಭಾನುವಾರ ಸಂಜೆ ಪ್ರತಿಭಟನೆ ನಡೆಸಲಾಯಿತು. ಶನಿವಾರ ತಡರಾತ್ರಿ ತಲವಾರು ದಾಳಿಯಿಂದಾಗಿ ಸಾವನ್ನಪ್ಪಿದ ಯತೀಶ್ ಹಾಗೂ ಭರತ್ ಮೃತದೇಹಗಳ ಮರಣೋತ್ತರ ಪರೀಕ್ಷೆ ಮಣಿಪಾಲ ಆಸ್ಪತ್ರೆಯಲ್ಲಿ ನಡೆಯಿತು. ಭಾನುವಾರ ಸಂಜೆ ಆಸ್ಪತ್ರೆಯಿಂದ ನೇರವಾಗಿ ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಇಬ್ಬರ ಶವವಿಟ್ಟು ವಿವಿಧ ಸಂಘ ಸಂಸ್ಥೆಗಳು, ಸ್ನೇಹಿತರು, ಕುಟುಂಬಸ್ಥರು ಪ್ರತಿಭಟನೆ […]

ಕೋಟ ಸಮೀಪ ತಡರಾತ್ರಿ ಜೋಡಿಕೊಲೆ

ಕೋಟ:ಪರಸ್ಪರ ತಲವಾರು ದಾಳಿಗೈದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಕೋಟದ ಸಮೀಪ ನಡೆದಿದೆ. ಯತೀಶ್ ಹಾಗೂ ಭರತ್ ಸಾವನ್ನಪ್ಪಿದವರು. ಇಬ್ಬರು ಯುವಕರು ಕೋಟ ನಿವಾಸಿಗಳು ಕೋಟ ರಾಜಲಕ್ಷ್ಮೀ ಸಭಾಂಗಣದೆದುರು ತಲವಾರು ದಾಳಿ ನಡೆದಿದೆ‌. ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಂದ್ರ ಬೊಲೇರೊ ವಾಹನ ಶಾಂಭವಿ ನದಿಗೆ ಬಿದ್ದು, ಓರ್ವ ಮಹಿಳೆ ಸಾವು

ಕಾರ್ಕಳ: ಮುಂಡ್ಕೂರು ಗ್ರಾಮದ ಸಂಕಲಕರಿಯ ಶಾಂಭವಿ ನದಿಗೆ ಮಹೇಂದ್ರ ಬೊಲೇರೊ ವಾಹನ ನಿಯಂತ್ರಣ ತಪ್ಪಿ  ಕೆಳಗೆ ಬಿದ್ದು  ಸಾವನ್ನಪ್ಪಿದ ಘಟನೆ ಜ.12ರಂದು ಬೆಳಗ್ಗೆ ನಡೆದಿದೆ. ವಾಹನದಲ್ಲಿ ಒಂದೇ ಮನೆಯ 4 ಜನ ಪ್ರಯಾಣ ಮಾಡುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ವಾಹನ ನದಿಗೆ ಬಿದ್ದಿದೆ. ನದಿಗೆ ಬಿದ್ದ ರಭಸದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ 3 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರನ್ನು ಕಾರ್ಕಳ ಬೋಳ ನಿವಾಸಿ ಡೈನಾ ಮಸ್ಕರೇನಸ್(44) ಎಂದು ಗುರುತಿಸಲಾಗಿದೆ. ಜೀಪು ಚಲಾಯಿಸುತ್ತಿದ್ದ ಮೃತರ ಪತಿ ಸ್ಟಾನಿ […]

ಕಟ್ಟಡದ 8 ನೇ ಮಹಡಿಯ ಮೇಲೆ, ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಉಡುಪಿ:ನಗರದ ಕಲ್ಸಂಕ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 8 ನೇ ಮಹಡಿಯಲ್ಲಿ ಅಪರಿಚಿತ ಸುಮಾರು 22 ವರ್ಷದ ಯುವಕನೊರ್ವನ ಶವವು ನೇಣು ಕುಣಿಕೆಯಲ್ಲಿ ನೆಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ವ್ಯಕ್ತಿ ಮೃತಪಟ್ಟು ಕೆಲವು ದಿನಗಳಾದರಿಂದ ಶವ ಕೊಳೆತು ಹುಳಗಳಾಗಿ ಗಬ್ಬು ವಾಸನೆಯಿಂದ ನಾರುತಿತ್ತು. ವಿಷಯ ತಿಳಿದ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಶವ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ಹೊರ ರಾಜ್ಯದ ವಿದ್ಯಾರ್ಥಿ ಇರಬೇಕೆಂದು ಶಂಕಿಸಲಾಗಿದೆ. ನಿರ್ಮಾಣದ ಹಂತದ […]