ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡ ಟೈಗರ್ಸ್ : ಹುಬ್ಬಳ್ಳಿಗೆ 5 ವಿಕೆಟ್‌ಗಳಿಂದ ಮಂಗಳೂರು ವಿರುದ್ಧ ಗೆಲುವು.

ಬೆಂಗಳೂರು: ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲಿ ಅಗ್ರ ಸ್ಥಾನ ಕಾಪಾಡಿಕೊಂಡಿದೆ. ಹುಬ್ಬಳ್ಳಿ ಪರ ಮನ್ವಂತ್ ಕುಮಾರ್ (5/33) ಮೊಹಮ್ಮದ್ ತಾಹಾ (51) ಮತ್ತು ನಾಯಕ ಮನೀಶ್ ಪಾಂಡೆ (56*) ಆಟದ ನೆರವಿನಿಂದ ಮಂಗಳೂರು ತಂಡವನ್ನು ನಿರಾಯಾಸವಾಗಿ ಹುಬ್ಬಳ್ಳಿ ಸೋಲಿಸಿತು.ಲೀಗ್​ನಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹುಬ್ಬಳ್ಳಿ ಟೈಗರ್ಸ್ ಅಂಕಪಟ್ಟಿಯಲ್ಲಿ 16 ಅಂಕದಿಂದ ಅಗ್ರ ಪಟ್ಟವನ್ನು ಉಳಿಸಿಕೊಂಡಿದೆ. ಅಲ್ಲದೇ ನಿನ್ನೆ ಶಿವಮೊಗ್ಗ ಲಯನ್ಸ್​ […]