ಪ್ರತಿಭೆ, ಸಮಯ ಮತ್ತು ಸ್ಪೂರ್ತಿ ಸಾಹಿತ್ಯದ ಬೆಳವಣಿಗೆ ಅಗತ್ಯ: ನೀಲಾವರ ಸುರೇಂದ್ರ ಅಡಿಗ

ಉಡುಪಿ: ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯಸಾಂಗತ್ಯ-6 ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ‘ಸಾಹಿತ್ಯದೆಡೆಗೆ ಯುವಜನತೆ’ ಎಂಬ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪ್ರತಿಭೆ, ಸಮಯ ಮತ್ತು ಸ್ಪೂರ್ತಿ ಇದ್ದರೆ ಸಾಹಿತ್ಯದ ಬೆಳವಣಿಗೆಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯವನ್ನು ಮೈಗೂಡಿಸಿಕೊಳ್ಳುವುದರಿಂದ ಅವರ ಸಂಪೂರ್ಣ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಮತ್ತು ಧನಾತ್ಮಕವಾಗಿ ಚಿಂತಿಸುವುದರಿಂದ ವ್ಯಕ್ತಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ […]

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮ

ಕಾರ್ಕಳ: ವಿಶೇಷ ಪರಿಶ್ರಮದಿಂದ ಕೂಡಿದ ಪ್ರಯತ್ನ ಯಶಸ್ಸನ್ನು ದೊರಕಿಸಿಕೊಡುತ್ತದೆ. ತನ್ಮೂಲಕ ವಿಶ್ವವ್ಯಾಪಿಯನ್ನಾಗಿಸಿ ಪ್ರಪಂಚವನ್ನು ಆಳಲು ತೊಡಗುತ್ತದೆ. ಆದ್ದರಿಂದ ಕ್ರಿಯಾಶೀಲತೆಯೇ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ, ಖ್ಯಾತ ವಾಗ್ಮಿ ಕೆ. ರಾಜೇಂದ್ರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ ಮಾತನಾಡಿ ಸಾಧನೆಯ ಕಡೆಗೆ ತುಡಿತ, ಅವಕಾಶವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕೆಂದು ಕರೆ ನೀಡಿದರು. ಪ್ರಾಂಶುಪಾಲ ವಿದ್ವಾನ್ […]

ಸಿ.ಎ ಫೌಂಡೇಶನ್ ಪರೀಕ್ಷೆ: ಕ್ರಿಯೇಟಿವ್ ಕಾಲೇಜಿನ ದೀಕ್ಷಾಆಚಾರ್ಯ ಹಾಗೂ ಶ್ರಾವ್ಯಾ ಸಿ.ಎಸ್ ಉತ್ತೀರ್ಣ

ಕಾರ್ಕಳ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ(ICAI) ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ಯ ಮತ್ತು ಶ್ರಾವ್ಯಾ ಸಿ.ಎಸ್ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಸಿ.ಎ ಮತ್ತು ಸಿ.ಎಸ್.ಇ.ಇ. ಟಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ನಡೆಸಿದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ […]

ಕಾರ್ಕಳ: ನ.29 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ನುಡಿಹಬ್ಬ; ಡಾ. ಹಿರೇಮಗಳೂರು ಕಣ್ಣನ್ ಭಾಗಿ

ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29 ರಂದು ಬೆಳಗ್ಗೆ 10 ಗಂಟೆಯಿಂದ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನುಡಿಹಬ್ಬ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ, ಚಿಂತಕ ಡಾ. ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ. ಇಂಧನ ಸಚಿವ ವಿ.ಸುನಿಲ್ ಕುಮಾರ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕ್ರಿಯೇಟಿವ್‌ ಕಾಲೇಜಿಗೆ ಪ್ರಥಮ ಸ್ಥಾನ

ಕಾರ್ಕಳ: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಮಂತ್‌ ಶೆಟ್ಟಿ ಮತ್ತು ನಿಹಾರ್‌ ಭಟ್‌ ಪ್ರಥಮ ಸ್ಥಾನ ಗಳಿಸಿದ್ದಾರೆ. ‘ಆಜಾದಿ ಕಾ ಅಮೃತ್‌ ಮಹೋತ್ಸವ್‌’ ನ ಸುಸಂದರ್ಭದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 03 ರಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿಗಳಾದ ಸುಮಂತ್‌ ಶೆಟ್ಟಿ ಮತ್ತು ನಿಹಾರ್‌ […]