ಹಾಸನ: ಗೋವಿನಿಂದಲೇ ಸಾವಿಗೀಡಾದ ಗೋಕಳ್ಳ…! 

ಹಾಸನ: ಗೋವು ಕಳ್ಳತನ ಮಾಡಲು ಹೋದ  ವ್ಯಕ್ತಿಯೋರ್ವ ಗೋವಿನಿಂದಲೇ ಸಾವೀಗೀಡಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಗೋಕಳ್ಳ  ಗೋವಿಂದಪ್ಪ ಮೃತಪಟ್ಟವನು. ತೋಟದ ಮನೆಯಲ್ಲಿದ್ದ ಹಸುವೊಂದನ್ನು‌ ಕಳ್ಳತನ ಮಾಡಿ ಸ್ವಲ್ಪ ದೂರ ಸಾಗಿಸಿದ್ದ. ಅನಂತರ ನಿರ್ಜನ ಪ್ರದೇಶದಲ್ಲಿ ಗೋವಿನ ಕಾಲನ್ನು ಕಟ್ಟಲು ಮುಂದಾದಾಗ ಆತನ ಮರ್ಮಾಂಗಕ್ಕೆ ಗೋವು ಒದ್ದಿರುವ ಪರಿಣಾಮ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ‌ ಎನ್ನಲಾಗಿದೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ ಎನ್ನಲಾಗಿದ್ದು, ಈ ಘಟನೆ ಸಂಬಂಧಿಸಿದಂತೆ ನುಗ್ಗೆಹಳ್ಳಿ ಪೊಲೀಸ್ […]

ಮಂಗಳೂರು: ಕೇಂದ್ರ ಸರಕಾರ ಗೋಹತ್ಯೆ ನಿಷೇಧಿಸಲಿ: ಯು.ಟಿ ಖಾದರ್

ಮಂಗಳೂರು: ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅಕ್ರಮ ಗೋ ಸಾಗಾಟದ ವಿರುದ್ಧ ಹೋರಾಟ ಅಗತ್ಯ. ಎಲ್ಲಾ ಧರ್ಮೀಯರು ಅಕ್ರಮ ಗೋಸಾಗಾಟವನ್ನು ವಿರೋಧಿಸುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ದೇಶದಲ್ಲಿ ಗೋಹತ್ಯೆ ನಿಷೇಧಿಸಲಿ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಡೆಂಘಿ ಪ್ರಕರಣ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ: ಮಂಗಳೂರಲ್ಲಿ ಡೆಂಘಿ ಜ್ವರ ಪ್ರಕರಣ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಮಾಹಿತಿ ಪಡೆದಿದ್ದೇನೆ. ಜತೆಗೆ ಮುನ್ನೆಚ್ಚರಿಕೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು‌ ತಿಳಿಸಿದರು. ಐಎಂಎ […]

ಗೋವುಗಳ ಕಳ್ಳಸಾಗಾಟ ತಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹಟ್ಟಿಯಿಂದ ಗೋಕಳ್ಳತನ, ಅಕ್ರಮ ಗೋಸಾಗಾಟವನ್ನು ತಡೆಯಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ‌ ಪರಿಷತ್ ಹಾಗೂ‌ ಬಜರಂಗದಳದ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಲಾಯಿತು. ಕಾನೂನನ್ನು ಗಾಳಿಗೆ ತೂರಿ ಹಿಂದೂಗಳು ಪವಿತ್ರ ಭಾವನೆಯಿಂದ ಪೂಜಿಸುವ ಗೋಮಾತೆ ಲಯ ಅಕ್ರಮ ಕಳ್ಳ ಸಾಗಾಟ ಜಿಲ್ಲಾದ್ಯಂತ ನಡೆಯುತ್ತಿದ್ದು, ಇದು ಸ್ವಸ್ಥ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಮಾಡುವ ದುಷ್ಕೃತ್ಯವಾಗಿದೆ. ಬಡ ಕೃಷಿ ಕುಟುಂಬದವರು ಬ್ಯಾಂಕ್ ಸಾಲ […]

ಪಟಾಕಿ ಸಿಡಿಸಿ ಅಕ್ರಮ ಗೋ ಮಾರಾಟಗಾರರ ಸಂಭ್ರಮ, ಹಿಂದೂ‌ ಸಂಘಟನೆಗಳ ಆಕ್ರೋಶ

ಮಂಗಳೂರು: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 24 ಗೋವುಗಳನ್ನು ಮಂಗಳೂರಿನ ಪಣಂಬೂರು ಪೊಲೀಸರು ರಕ್ಷಣೆ ಮಾಡಿದ್ದರು. ಆದರೆ ಅದೇ ಗೋವುಗಳನ್ನು ಸುಳ್ಳು ದಾಖಲೆ ಸೃಷ್ಟಿಮಾಡಿ ಕೋರ್ಟ್ ಮೂಲಕ ಬಿಡಿಸಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವದ ಮೂಲಕ ತೆಗೆದುಕೊಂಡು ಹೋದ ಗೋಹಂತಕರ ಕೃತ್ಯವನ್ನು ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ಖಂಡಿಸಿದೆ. ಜತೆಗೆ ಪೊಲೀಸ್ ಇಲಾಖೆಯ ವಿರುದ್ಧ ನಡೆಸಿದ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸಿ ಕೋಮುಗಲಭೆಗೆ ಪ್ರಚೋದನೆ ನೀಡುವ ಇಂತಹ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರಗಿಸಲು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ […]

ಕಾರ್ಕಳ ಮುಡಾರು ಕರುವಿನ‌ ರುಂಡ ಪತ್ತೆ, ತಾಲೂಕಿನಾದ್ಯಂದ ಅಕ್ರಮ ಕಸಾಯಿಖಾನೆ ನಡೆಯುತ್ತಿರುವ ಶಂಖೆ

ಕಾರ್ಕಳ: ತಾಲೂಕಿನಾದ್ಯಂತ ಅಕ್ರಮ ಕಸಾಯಿಖಾನೆಗಳು ಕಾರ್ಯಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಲೆಮಾರಿ ಜಾನುವಾರುಗಳನ್ನು ಅಮಾನುಷವಾಗಿ ಕಡಿದು, ಅದರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಂಗಳವಾರ ಮುಡಾರು ಆಲ್ದಟ್ಟ ಸೇತುವೆಯ ತಳಭಾಗದಲ್ಲಿ ಕಪ್ಪು ಬಣ್ಣದ ಕರುವೊಂದರ ತಲೆ, ಚರ್ಮ ಹಾಗೂ ದೇಹದ ಇತರ ಭಾಗ ದೊರೆತಿದೆ. ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ತುಂಬಿಸಿ ಎಸೆಯಲಾಗಿದೆ. ಶನಿವಾರ ರಾತ್ರಿಯಿಂದ ರವಿವಾರ ನಸುಕಿನ ಜಾವದೊಳಗಾಗಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ತಾಲೂಕಿನ ಬಜಗೋಳಿ, ಹೊಸ್ಮಾರು,  ನಿಟ್ಟೆ, ಮುದ್ರಾಡಿ ಮೊದಲಾದ ಭಾಗಗಳಲ್ಲಿ ನಡೆದ […]