ಉಡುಪಿಯಲ್ಲಿ ಕೋವಿಡ್ -19  ಸರ್ಕಾರಿ ಪರೀಕ್ಷಾ ಲ್ಯಾಬ್ ಉದ್ಘಾಟನೆ

ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿರುವ,  ಕೋವಿಡ್-19 ಸರ್ಕಾರಿ ಪರೀಕ್ಷಾ ಲ್ಯಾಬ್ ನ್ನು ರಾಜ್ಯದ ಮುಜರಾಯಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು, ರಾಜ್ಯದಲ್ಲೇ ಕೊರೋನಾ ಆರಂಭದಲ್ಲಿ ಕೇವಲ ಒಂದು ಪರೀಕ್ಷಾ ಲ್ಯಾಬ್ ಮಾತ್ರ ಇದ್ದು, ಆದರೆ ಈ ಲ್ಯಾಬ್ ನೊಂದಿಗೆ  ರಾಜ್ಯದಲ್ಲಿನ ಕೋವಿಡ್ ಪರೀಕ್ಷಾ ಲ್ಯಾಬ್ ಗಳ ಸಂಖ್ಯೆ 82 ಕ್ಕೇರಿದೆ. ಜಿಲ್ಲೆಯಲ್ಲಿ ಮೊದಲು ಟೆಸ್ಟಿಂಗ್ ಗಾಗಿ ಮಂಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳನ್ನು ಅವಲಂಬಿಸಬೇಕಿತ್ತು, […]