ಕೊರೋನಾ ಮಣಿಸಲು ಲಸಿಕೆಯೊಂದೆ ಪರಿಹಾರ: ನರೇಂದ್ರ ಮೋದಿ
ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ, ನಾಲ್ಕನೇ ಅಲೆ ಶುರುವಾಗಿರುವ ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದಲ್ಲಿ ಕೊರೋನಾ ಸಂಕಟ ಇನ್ನೂ ತಗ್ಗಿಲ್ಲ, ಕೊರೋನಾ ಮಣಿಸಲು ಇರುವ ಒಂದೇ ದಾರಿಯೆಂದರೆ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವುದು ಎಂದರು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜೊತೆಗೂಡಿ ಕೊರೋನಾ ಜೊತೆ ಹೋರಾಡಬೇಕು. ಹೆಚ್ಚುತ್ತಿರುವ ಕೊರೋನಾ ಕೇಸ್ ಗಳ […]
ಆಸ್ಪತ್ರೆ ದಾಖಲಾಗುವ ಮೊದಲಿನ ರೋಗಲಕ್ಷಣರಹಿತ ರೋಗಿಗಳ ಮುನ್ನೆಚ್ಚರಿಕಾ ಕೋವಿಡ್ ಪರೀಕ್ಷೆ ಸ್ಥಗಿತ: ಸಚಿವ ಸುಧಾಕರ್
ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ರೋಗಲಕ್ಷಣವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಮುನ್ನ, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ವಿಧಾನಗಳನ್ನು ಮಾಡುವ ಮೊದಲು ಮಾಡಬೇಕಾಗಿದ್ದ ಕೋವಿಡ್-19 ಮುನ್ನೆಚ್ಚರಿಕಾ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ಬುಧವಾರ (ಫೆ.23) ಮಾಹಿತಿ ನೀಡಿದ್ದಾರೆ. ಇದು ಹಿಂದಿನ ಕೋವಿಡ್-19 ಪಾಸಿಟಿವ್ ಆಗಿದ್ದ ರೋಗಿಗಳು, ಗುಣಮುಖರಾದವರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಾನ್- ಕೋವಿಡ್ […]