ಮಂಗಳೂರಿಗೆ ಆಗಮಿಸಿದ ಐಷಾರಾಮಿ ಹಡಗು ಕೋಸ್ಟಾ ವಿಕ್ಟೋರಿಯ

ಮಂಗಳೂರು: ಮಂಗಳೂರಿನ ಎನ್ಎಂಪಿಟಿ ಬಂದರಿಗೆ ಐಷಾರಾಮಿ ಹಡಗು ವಿದೇಶಿ ಪ್ರಯಾಣಿಕರನ್ನ ಹೊತ್ತು ತಂದಿದೆ. ಕೋಸ್ಟಾ ವಿಕ್ಟೋರಿಯಾ ಎಂಬ ಹೆಸರಿನ ಈ ಐಷಾರಾಮಿ ಹಡಗು ಮುಂಬೈಯಿಂದ ಪಣಂಬೂರಿನಲ್ಲಿರುವ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ 1,800 ಪ್ರಯಾಣಿಕರು ಹಾಗೂ 786 ಸಿಬ್ಬಂದಿ ಆಗಮಿಸಿದರು. ಮಂಗಳೂರು ನಗರಕ್ಕೆ ಆಗಮಿಸಿದ ವಿದೇಶಿ ಅತಿಥಿಗಳನ್ನ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅನಂತರ ಪ್ರಯಾಣಿಕರನ್ನು ಮಂಗಳೂರಿನ ವಿವಿಧ ದೇವಾಲಯ, ಚರ್ಚ್ ಹಾಗೂ ಇನ್ನಿತರ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಯಿತು.