ವಿದೇಶದಿಂದ ಬಂದ ಐದು ಮಂದಿಯಲ್ಲಿ ಕೊರೊನಾ ಶಂಕೆ: ಆಸ್ಪತ್ರೆಗೆ ದಾಖಲು

ಉಡುಪಿ: ವಿದೇಶದಿಂದ ಐದು ಮಂದಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿದ್ದು, ಮೂವರಿಗೆ ಜಿಲ್ಲಾಸ್ಪತ್ರೆ, ಒಬ್ಬನಿಗೆ ಮಣಿಪಾಲದ ಕೆಎಂಸಿ ಹಾಗೂ ಇನ್ನೊಬ್ಬನಿಗೆ ಕುಂದಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಈಚೆಗೆ ದುಬೈನಿಂದ ಬಂದಿದ್ದ ಇಬ್ಬರಲ್ಲಿ ಜ್ವರ, ಶೀತ, ಕೆಮ್ಮು, ಕತಾರ್ ನಿಂದ ಆಗಮಿಸಿದ ವ್ಯಕ್ತಿಯಲ್ಲಿ ತೀವ್ರ ತಲೆನೋವು, ಜ್ವರ ಕಾಣಿಸಿಕೊಂಡಿದ್ದು, ಮತ್ತಿಬ್ಬರು ಅಬುದಾಬಿ ಹಾಗೂ ಬ್ರೈಹಿರಿನ್ ನಿಂದ ಮರಳಿದ್ದು, ಅವರಲ್ಲಿ ಜ್ವರ, ಗಂಟಲು ನೋವಿನ ಲಕ್ಷಣ ಕಾಣಿಸಿಕೊಂಡಿದೆ. ಮೂರು ಮಂದಿಗೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಮತ್ತು ಒಬ್ಬನಿಗೆ […]