ಕೊರೋನಾ ಸೋಕಿತ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ತೆರವು
ಕುಂದಾಪುರ: ಕೊರೋನಾ ಸೋಂಕಿತ ವ್ಯಕ್ತಿ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಅನ್ನು ಇಪ್ಪತ್ತು ದಿನಗಳ ಬಳಿಕ ಸೀಲ್ ಡೌನ್ ನಿಂದ ಮುಕ್ತಿಗೊಳಿಸಲಾಗಿದೆ. ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ್ದರು. ಹೀಗಾಗಿ ಕಳೆದ 21ದಿನಗಳಿಂದ ಪೆಟ್ರೋಲ್ ಬಂಕ್ ಸೀಲ್‌ಡೌನ್ ಮಾಡಲಾಗಿತ್ತು. ಕ್ವಾರೆಂಟೈನ್ ಅವಧಿಯ 28 ದಿನಗಳಾದ ಹಿನ್ನೆಲೆ ಇದೀಗ ಪೆಟ್ರೋಲ್ ಬಂಕ್ ಸೀಲ್‌ಡೌನ್ ತೆರವುಗೊಳಿಸಲಾಗಿದ್ದು, ಸೋಮವಾರದಿಂದ ಪೆಟ್ರೋಲ್ […]