ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ
ಬೆಂಗಳೂರು: ಕೊವೀಡ್೧೯ ಸೋಂಕಿನಿಂದ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಸೋಂಕಿಗೆ ಸಾವಿಗೀಡಾದವರ ಸಂಖ್ಯೆ ಒಟ್ಟು 57ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ ವರದಿಯಾದ ಪ್ರಕರಣಗಳು: ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಬೆಳಗಾವಿಯಲ್ಲಿ 12, ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 2, ಗದಗದಲ್ಲಿ 2 ಹಾಗೂ ವಿಜಯಪುರ, ಮೈಸೂರು, ಬಳ್ಳಾರಿ, ತುಮಕೂರು, ಹಾವೇರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಒಟ್ಟು 106 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.