ಉಡುಪಿಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣ ದಾಖಲು
ಉಡುಪಿ: ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಸಂಜೆ ಕೊರೊನಾ ಬುಲೆಟಿನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಐದು ಪ್ರಕರಣಗಳ ಪೈಕಿ ಮೂವರು ಮುಂಬೈನಿಂದ, ಓರ್ವ ತೆಲಂಗಾಣ ಹಾಗೂ ಮತ್ತೊಬ್ಬ ಮಹಿಳೆ ಯುಎಇ ನಿಂದ ಬಂದಿದ್ದು, ಇವರು ಕ್ವಾರಂಟೈನ್ ನಲ್ಲಿದ್ದರು. ಅವರ ಗಂಟಲಿನ ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದೀಗ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.