ಉಡುಪಿ: ಮುಂಬೈನಿಂದ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್: ಒಂದೇ ದಿನ 29 ಸೋಂಕಿತರು ಪತ್ತೆ
ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂದು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಬೈನಿಂದ ಬಂದ ಇಬ್ಬರು ಪುರುಷರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಜಿಲ್ಲೆಯಲ್ಲಿ ಇಂದು 29 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಕೊರೊನಾ ಅಟ್ಟಹಾಸ: ಎಂಟು ಮಕ್ಕಳಿಗೆ ಕೊರೊನಾ ಪಾಸಿಟಿವ್
ಉಡುಪಿ: ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 8 ಮಕ್ಕಳು ಸೇರಿದಂತೆ ಇಂದು ಹೊಸದಾಗಿ ಜಿಲ್ಲೆಯಲ್ಲಿ 16 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಮಧ್ಯಾಹ್ನ ಬಿಡುಗಡೆಗೊಂಡ ರಾಜ್ಯ ಕೊರೊನಾ ಬುಲೆಟಿನ್ ನಲ್ಲಿ ಮಾಹಿತಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಪತ್ತೆಯಾದ 16 ಕೊರೊನಾ ಸೋಂಕಿತರ ಪೈಕಿ 14 ಮಂದಿ ಮುಂಬೈ ಹಾಗೂ ಇಬ್ಬರು ದುಬೈನಿಂದ ಬಂದಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದು ಮತ್ತಷ್ಟು ಆತಂಕವನ್ನು […]
ಕಾರ್ಕಳದ 9 ತಿಂಗಳ ಗರ್ಭಿಣಿ, ಮೂರು ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಪಾಸಿಟಿವ್: ಜಿಲ್ಲಾಧಿಕಾರಿ ಜಿ. ಜಗದೀಶ್
ಉಡುಪಿ: ಕಾರ್ಕಳ ತಾಲ್ಲೂಕಿನ 9 ತಿಂಗಳ ಗರ್ಭಿಣಿ ಸೇರಿದಂತೆ ಇಂದು ಹೊಸದಾಗಿ ಜಿಲ್ಲೆಯ 18 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಕಾರ್ಕಳದ ಗರ್ಭಿಣಿಗೆ ಯಾವುದೇ ಬಾಹ್ಯ ಸಂಪರ್ಕ ಇಲ್ಲದಿದ್ದರು ಸೋಂಕು ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದ್ದು, ಗರ್ಭಿಣಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ. 18 ಜನ ಸೋಂಕಿತರ […]