ಕಾಪು ಠಾಣೆಯ ಎಎಸ್ಐಗೆ ಕೊರೊನಾ ಪಾಸಿಟಿವ್: ಠಾಣೆ ತಾತ್ಕಾಲಿಕವಾಗಿ ಸಮೀಪದ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ

ಕಾಪು: ಕಾಪು ಪೊಲೀಸ್ ಠಾಣೆಯ ಎಎಸ್ಐಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.‌ ಠಾಣೆಯನ್ನು ಮುಂದಿನ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸಮೀಪದ ವೀರಭದ್ರ ದೇವಸ್ಥಾನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇವರು ಪ್ರತಿದಿನ ಕೋಟದಿಂದ ಠಾಣೆಗೆ ಬಸ್ ನಲ್ಲಿ ಸಂಚರಿಸುತ್ತಿದ್ದರು. ಇವರಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.