ಕೊರೊನಾ ಸೋಂಕು: ಇಂಗ್ಲೆಂಡ್‌ನಲ್ಲಿ ಭಾರತ ಮೂಲದ ವೈದ್ಯ ಸಾವು

ಲಂಡನ್‌: ಕೊರೊನಾ ವೈರಸ್‌ ಸೋಂಕು ತಗುಲಿ ಭಾರತ ಮೂಲದ ವೈದ್ಯರೊಬ್ಬರು ಇಂಗ್ಲೆಂಡ್ ನಲ್ಲಿ ಸಾವನ್ನಪ್ಪಿಗಿದ್ದಾರೆ. ವೈದ್ಯ ವೃತ್ತಿ ನಿರ್ವಹಿಸಿತ್ತಿದ್ದ ಜಿತೇಂದ್ರ ಕುಮಾರ್‌ ರಾಥೋಡ್‌ ಅವರು ಸರ್ಜರಿ ವಿಭಾಗದಲ್ಲಿ ಸಹಾಯಕ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅತ್ಯುತ್ತಮ ಶಸ್ತ್ರ ಚಿಕಿತ್ಸಕರೆಂದೇ ಖ್ಯಾತರಾಗಿದ್ದರು. 58 ವರ್ಷದ ರಾಥೋಡ್‌ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.