ಸಿಎಂ ಮನೆಗೂ ಲಗ್ಗೆಯಿಟ್ಟ ಕೊರೊನಾ: ಹೆಚ್ಚುವರಿ ಕಾರು ಚಾಲಕ, ಸಿಬ್ಬಂದಿಗೆ ಕೊರೊನಾ ಪಾಸಿಟಿವ್: ಯಡಿಯೂರಪ್ಪ ಹೋಮ್ ಕ್ವಾರಂಟೈನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತಷ್ಟು ತಲ್ಲಣ ಸೃಷ್ಟಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಮುಖ್ಯಮಂತ್ರಿ ಮನೆಗೂ ಕೊರೊನಾ ಕಾಲಿಟ್ಟಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದ ಕೆಲವು ಸಿಬ್ಬಂದಿ ಮತ್ತು ಯಡಿಯೂರಪ್ಪನವರ ಹೆಚ್ಚುವರಿ ಚಾಲಕರೊಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಸಂಪರ್ಕಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಕೆಲವು ದಿನಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳು ನಿರಂತರ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಭಾರದ ಒತ್ತಡವು […]