ಅಯೋಧ್ಯೆಯಲ್ಲಿ 25000 ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ ನಿರ್ಮಾಣ: ಪೇಜಾವರ ಶ್ರೀ

ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ‌ಕುರಿತು ಮಾಹಿತಿ ನೀಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದ್ದು ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ […]