ಜನಸಾಮಾನ್ಯರ ಜೊತೆ ಬೆರೆತ ರಾಜಕಾರಣಿ ಗೋಪಾಲ ಭಂಡಾರಿ:ಎಂ.ಎ. ಗಫೂರ್
ಉಡುಪಿ: ಜಾತ್ಯತೀತತೆಗೆಹೆಚ್ಚಿನ ಒತ್ತು ನೀಡಿದ್ದ ಗೋಪಾಲ ಭಂಡಾರಿ ಅವರು, ಸದಾ ಸಾಮಾನ್ಯ ಜನರೊಂದಿಗೆ ಬೆರೆಯುತ್ತಿದ್ದರು ಈ ಮೂಲಕ ಜನಸಾಮಾನ್ಯರ ರಾಜಕಾರಣಿಯಾದರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಹೇಳಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು. ಭಂಡಾರಿಯವರು ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ಶುದ್ಧ ಮನಸ್ಸಿನೊಂದಿಗೆ […]