ಬೈರಂಪಳ್ಳಿ: ಮನೆ ಅಂಗಳದಲ್ಲೇ ಬಸ್ ಕಂಡಕ್ಟರ್ ಬರ್ಬರ ಹತ್ಯೆ
ಉಡುಪಿ: ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ತನ್ನ ಮನೆ ಅಂಗಳದಲ್ಲೇ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿ ಪೆರ್ಡೂರು, ಬೈರಂಪಳ್ಳಿ ಎಂಬಲ್ಲಿ ಸಂಭವಿಸಿದೆ.ಪ್ರಶಾಂತ್ ಪೂಜಾರಿ (38) ಕೊಲೆಯಾದವರು.ಗುರುವಾರ ಮಧ್ಯರಾತ್ರಿ ವೇಳೆಗೆ ಪ್ರಶಾಂತ್ ಅವರ ಮನೆಗೆ ಬಂದ ಇಬ್ಬರು ಪ್ರಶಾಂತ್ ಜತೆ ಜಗಳಕ್ಕಿಳಿದಿದ್ದಾರೆ. ಜಗಳ ತರಾಕಕ್ಕೇರಿ ಅಲ್ಲೇ ಕೊಲೆ ಮಾಡಿದ್ದಾರೆ.ಆರೋಪಿಗಳ ಬಗ್ಗೆ ಇನ್ನಷ್ಟೇ ಸುಳಿವು ಪತ್ತೆಯಾಗಬೇಕಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ.ಪರಿಚಯಸ್ಥರೇ ಕೃತ್ಯ ಎಸಗಿರಬಹುದು. ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು […]