ಕಟ್ ಬೆಳ್ತೂರ್: ಮತಾಂತರದ ವಿರುದ್ದ ದೂರು
ಉಡುಪಿ: ಕಟ್ ಬೆಳ್ತೂರ್ ನಲ್ಲಿ ಸ್ವ- ಸಮಾಜದವರನ್ನು ಮತಾಂತರ ಮಾಡುತ್ತಿದ್ದು ,ಅದರ ವಿರುದ್ದ ಉಡುಪಿಯ ಎಸ್.ಪಿ. ನಿಶಾ ಜೇಮ್ಸ್ ಅವರಿಗೆ ವಿಶ್ವಕರ್ಮ ಒಕ್ಕೂಟದ ವತಿಯಿಂದ ದೂರು ಸಲ್ಲಿಸಲಾಯಿತು. ಅಧ್ಯಕ್ಷರಾದ ಮಧು ಆಚಾರ್ಯ, ಗೌರವ ಅಧ್ಯಕ್ಷ ಸೀತಾರಾಮ ಆಚಾರ್ಯ,ಕಾರ್ಯದರ್ಶಿ ಮುರುಳಿದರ್ ಕೆ, ಹಾಗೂ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಕಿಶೋರ್ ಆರ್ ಆಚಾರ್ಯ,ಕಾರ್ಪೆಂಟರ್ ಅಧ್ಯಕ್ಷರಾದ ಗೋಕುಲ ಆಚಾರ್ಯ, ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.