ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ: ಡಿ. ಹರ್ಷೇಂದ್ರ ಕುಮಾರ್ ಅವರಿಗೆ ಅಗರಿ ಪ್ರಶಸ್ತಿ

ಸುರತ್ಕಲ್: ಯಕ್ಷಗಾನದಲ್ಲಿ ಕಾಲಮಿತಿ ಅಳವಡಿಕೆ ನಿಟ್ಟಿನಲ್ಲಿ ಹೊಸ ಪ್ರಯೋಗ ಅನಿವಾರ್ಯವಾದ ಕಾರಣ ಅದನ್ನು ಧರ್ಮಸ್ಥಳ ಮೇಳದಲ್ಲಿ ಜಾರಿಗೆ ತರಲಾಗಿದೆ. ಇದು ಬಳಿಕ ಇತರ ಮೇಳಗಳಲ್ಲಿಯೂ ಆರಂಭವಾಗಿದೆ. ಮೇಳದ ಯಜಮಾನನ ಮಿತಿ ಬಿಟ್ಟು ಚೌಕಿಯಲ್ಲಿ ಕಲಾವಿದರೊಂದಿಗೆ ತಾನು ಬೆರೆತ ಕಾರಣ ಮೇಳ ಯಶಸ್ಸು ಕಂಡಿದೆ. ಯಕ್ಷಗಾನ ಕಲಾವಿದರು ತ್ಯಾಗ ಜೀವಿಗಳಾಗಿದ್ದು, ಅವರಿಗೆ ಕಲೆಯೇ ತಪಸ್ಸಾಗಿದೆ. ಕಲಾವಿದರೇ ತನಗೆ ಆಸ್ತಿಯಾಗಿದ್ದಾರೆ. ಯಕ್ಷಗಾನ ಕಲಾವಿದರಿಗೆ ವೇಷ ನಿಗದಿಯನ್ನು ಅಭಿಮಾನಿಗಳು ನಿಗದಿಪಡಿಸುವುದು ಸರಿಯಲ್ಲ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ […]