ಭಾರತೀಯ ವಾಯುಪಡೆಯ ಹೊಸ ಯುದ್ದ ಸಮವಸ್ತ್ರ ಅನಾವರಣ

ಚಂಡೀಗಢ: ಭಾರತೀಯ ವಾಯುಪಡೆಯು ಶನಿವಾರದಂದು ತನ್ನ 90 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದೆ. ವಾಯುಪಡೆಯಲ್ಲಿ ವೆಪನ್ ಸಿಸ್ಟಮ್ಸ್ (ಶಸ್ತ್ರಾಸ್ತ್ರ ವ್ಯವಸ್ಥೆ) ಶಾಖೆ ಎಂದು ಕರೆಯಲ್ಪಡುವ ಹೊಸ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದಿಸಿದೆ. ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರನ್ನು ಒಂದೇ ಘಟಕದ ಅಡಿಯಲ್ಲಿ ಏಕೀಕರಿಸುವ ಗುರಿಯನ್ನು ಇದು ಹೊಂದಿದೆ. ವಾಯುಪಡೆಯ ಹೊಸದಾಗಿ ವಿನ್ಯಾಸಗೊಳಿಸಿದ ಯುದ್ಧ ಟೀ ಶರ್ಟ್ ಅನ್ನು ಕೂಡಾ ಸೇನೆಗೆ ಸೇರ್ಪಡೆಗೊಳಿಸಲಾಗಿದೆ. Indian Air Force Day: New Combat Uniform unveiled!@IAF_MCC […]