ಕರಾವಳಿ ಭದ್ರತಾ ತರಬೇತಿ: ಸಮಾರೋಪ ಸಮಾರಂಭ

ಉಡುಪಿ: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇಯ ತಂಡದ ತರಬೇತಿಯ ಸಮಾರೋಪ ಸಮಾರಂಭವು ಮಲ್ಪೆಯ ಸಿಎಸ್‌ಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಹೋಮ್‌ಗಾರ್ಡ್ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ತರಬೇತಿಯಿಂದಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳು ಹೆಚ್ಚು ಪರಿಣಿತರಾಗಿ ಇಲಾಖೆಯಲ್ಲಿ ಸಮರ್ಥ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ತೊಂದರೆಗೀಡಾದ ಸಾರ್ವಜನಿಕರ ಜೀವರಕ್ಷಣೆಗೆ ತರಬೇತಿಯು ಅನುಕೂಲವಾಗಲಿದೆ ಎಂದರು. ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಎಸ್‌ಪಿ ಹೆಜಮಾಡಿ ಠಾಣೆಯ ಎಎಸ್‌ಐ ಮೋಹನದಾಸ್, […]