ಮುಂಬೈ ಉದ್ಯಮಿಯಿಂದ ಪ್ಲಾಶ್ಟಿಕ್ ಬಳಕೆ ಅಪಾಯದ ಕುರಿತು ಜಾಗೃತಿ: ಪರ್ಯಾಯ ಬಟ್ಟೆ ಚೀಲ‌ ತಯಾರಿಕಾ ಸಂಸ್ಥೆ ಸ್ಥಾಪನೆ

ಉಡುಪಿ: ಪ್ಲಾಸ್ಟಿಕ್‌ ಬಳಕೆಯ ಅಪಾಯದ ಕುರಿತು ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಂದಾಪುರದ ಮೂಲದ ಉದ್ಯಮಿಯೊಬ್ಬರು ಫ್ರೆಂಡ್ಸ್‌ ಸ್ವಾವಲಂಬನಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ಹಾನಿ ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆಯ ಚೀಲಗಳನ್ನು ಉಪಯೋಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಬಳಕೆಯ ಅಪಾಯವನ್ನು ಮನಗಂಡ ಕುಂದಾಪುರ ಮೂಲದ ವೆಂಕಟೇಶ್‌ ಪೈ ಅವರು, 2013ರಲ್ಲಿ ಮುಂಬೈ ಸಮೀಪದ ಡೊಂಬಿವಲಿಯಲ್ಲಿ ಬಟ್ಟೆ ಚೀಲ ತಯಾರಿಸುವ ಫ್ರೆಂಡ್ಸ್‌ […]