ಸ್ಮಶಾನ ಕಾರ್ಮಿಕರಿಗೆ ‘ಸತ್ಯ ಹರಿಶ್ಚಂದ್ರ ಬಳಗ’ವೆಂದು ಸಂಬೋಧನೆ: ಮುಖ್ಯಮಂತ್ರಿ ಬೊಮ್ಮಾಯಿ ಆದೇಶ

ಬೆಂಗಳೂರು: ಇನ್ನು ಮುಂದೆ ಸ್ಮಶಾನ ಕಾರ್ಮಿಕರನ್ನು ‘ಸತ್ಯ ಹರಿಶ್ಚಂದ್ರ ಬಳಗ’ ಎಂದು ಸಂಬೋಧಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಇದರ ಜೊತೆಗೆ ಪೌರ ಕಾರ್ಮಿಕರನ್ನು ಖಾಯಂ ಮಾಡುವ ಬಗ್ಗೆಯೂ ಸೂಚನೆ ನೀಡಿದ್ದಾರೆ. ಸ್ಮಶಾನ ಕಾರ್ಮಿಕರು ಎಲ್ಲರಿಗೂ ಮುಕ್ತಿ ಕೊಡುವ ಕಾರ್ಯಮಾಡುತ್ತಾರೆ. ಅವರಿಗೆ ಸತ್ಯ ಹರಿಶ್ಚಂದ್ರ ಬಳಗ ಎಂದು ನಾಮಕರಣ ಮಾಡಿ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ತಮ್ಮ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಸ್ಮಶಾನ ಕಾರ್ಮಿಕರೊಂದಿಗೆ ಬೆಳಗ್ಗಿನ ಉಪಾಹಾರ ಸೇವಿಸುವ ಕಾರ್ಯಕ್ರಮದಲ್ಲಿ ಅವರು ಈ […]

ಪೌರ ಕಾರ್ಮಿಕರ ಜೊತೆ ದೀಪಾವಳಿ ಆಚರಿಸಿದ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉಡುಪಿಯ ಬೀಡಿನಗುಡ್ಡೆ ಬಳಿಯ ಪೌರಕಾರ್ಮಿಕ ಕಾಲೋನಿಯ ಸಮಸ್ತರನ್ನು ಅನುಗ್ರಹಿಸಿ ಮನೆಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರೊಂದಿಗೆ ಆಚರಿಸಿದರು.

ಕೊಡವೂರು: ಪೌರ ಕಾರ್ಮಿಕರಿಗೆ ಸನ್ಮಾನ

ಕೊಡವೂರು: ಇಲ್ಲಿನ ಪರಿಸರವನ್ನು ಪ್ರತಿನಿತ್ಯ ಸ್ವಚ್ಛ ಮಾಡುವುದರ ಜೊತೆಗೆ ಎಲ್ಲರ ಮನೆಯ ಕಸವನ್ನು ಅಚ್ಚುಕಟ್ಟಾಗಿ ವಿಲೇವಾರಿ ಮಾಡುವ ನಗರ ಸಭೆಯ ವಾಹನದ ಚಾಲಕರು ಮತ್ತು ಲೋಡರ್ ಗಳನ್ನು ಕೊಡವೂರಿನ ನಾಗರಿಕರ ಪರವಾಗಿ ಕೊಡವೂರಿನ ಯುವಕ ಸಂಘದಲ್ಲಿ ಸನ್ಮಾನಿಸಲಾಯಿತು. ಪೌರಕಾರ್ಮಿಕರಾದ ಸಂದೀಪ್, ರಮೇಶ್, ಶಾಮ ಇವರಿಗೆ ಶಾಲು ಹೊದೆಸಿ ಗೌರವಿಸಲಾಯಿತು. ನಗರಸಭಾ ಸದಸ್ಯ ವಿಜಯ್ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಸದಸ್ಯರಾದ ರಾಘವೇಂದ್ರ ರಾವ್, ವರ್ಷ ನಾರಾಯಣ್ ರಾವ್, ವಾಣಿ, ವಿನಯ್ ಮತ್ತಿತರರು ಉಪಸ್ಥಿತರಿದ್ದರು. […]