ಕಾರ್ಕಳದ ಅತ್ತೂರು ಬೆಸಿಲಿಕಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕೋತ್ಸವಾಚರಣೆಗಳು ಪ್ರಾರಂಭ

ಕಾರ್ಕಳ: ಫೆ.20, ಭಾನುವಾರದಂದು, ಅತ್ತೂರಿನ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾದ ವಾರ್ಷಿಕ ಉತ್ಸವದ ಆಚರಣೆಗಳು ಸಂಭ್ರಮದಿಂದ ಆರಂಭವಾಯಿತು. ಜನವರಿ ಕೊನೆಯ ವಾರದಲ್ಲಿ ನಡೆಯಬೇಕಿದ್ದ ವಾರ್ಷಿಕ ಹಬ್ಬವನ್ನು ಕೋವಿಡ್ ಭೀತಿಯಿಂದಾಗಿ ಮುಂದೂಡಲಾಗಿತ್ತು. ಭಾನುವಾರ ಬೆಳಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಬೆಳಗಿನ ಜಾವ ನಡೆದ ಹಬ್ಬದ ಪವಿತ್ರ ಆಚರಣೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ವಹಿಸಿದ್ದರೆ, ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.   […]

ಉಡುಪಿ: ಮೇ 4ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್

ಉಡುಪಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಮೇ4 ರವರೆಗೆ ಕೊರೊನಾ ನೈಟ್ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಸೂಚಿಸಿದ್ದಾರೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ  ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು […]