ಕ್ರಿಶ್ಚಿಯನ್ ರೈತರೋರ್ವರಿಗೆ ಕೃಪೆ ತೋರಿದ ನಾಗದೇವ..! ಕಿನ್ನಿಗೋಳಿಯಲ್ಲೊಂದು ಅಚ್ಚರಿಯ ಘಟನೆ
ಮಂಗಳೂರು: ನೀರಿಲ್ಲದೆ ಒಣಗಿ ಹೋಗಿದ್ದ ಕ್ರಿಶ್ಚಿಯನ್ ರೈತರೋರ್ವರ ಕೃಷಿ ತೋಟಕ್ಕೆ ನಾಗದೇವ ಕೃಪೆ ತೋರಿದ್ದಾನೆ. ಈ ಅಚ್ಚರಿಯ ಘಟನೆ ನಡೆದಿದ್ದು, ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ನಿಡ್ಡೋಡಿಯ ಗುಂಡೆಲ್ ಎಂಬಲ್ಲಿ. ಇಲ್ಲಿನ ನಿವಾಸಿ ವಿಕ್ಟರ್ ಡಿಸಿಲ್ವರ ಕೃಷಿ ತೋಟಕ್ಕೆ ಈ ಬಾರಿ ಮಳೆ ಇಲ್ಲದೆ ನೀರಿನ ಅಭಾವ ಎದುರಾಗಿತ್ತು. ಹೀಗಾಗಿ ಅವರು ಕಳೆದ ಕೆಲವು ಸಮಯದಿಂದ ತಮ್ಮ ಏಳು ಎಕರೆ ವ್ಯಾಪ್ತಿಯ ಅಡಿಕೆ ತೋಟಗಳ ಮಧ್ಯೆ ನಾಲ್ಕು ಕಡೆ ಕೊಳವೆ ಬಾವಿ ತೋಡಿಸಿದ್ದಾರೆ. ಅದರೆ ನೀರು ಸಿಕ್ಕಿರಲಿಲ್ಲ. […]