ಸೆಮಿಫೈನಲ್​ ಪ್ರವೇಶಿಸಿದ ಹಾಕಿ ತಂಡ : ಲಾಂಗ್ ಜಂಪ್‌, 4×400 ಮೀ ಮಿಶ್ರ ತಂಡಕ್ಕೆ ಬೆಳ್ಳಿ

ಹ್ಯಾಂಗ್‌ಝೌ (ಚೀನಾ): ಏಷ್ಯಾಡ್​ನಲ್ಲಿ ಭಾರತದ ಅಥ್ಲೀಟ್​ಗಳು ಪದಕ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ.19ನೇ ಏಷ್ಯನ್​ ಗೇಮ್ಸ್​ನಲ್ಲಿ ಈವರೆಗೆ ಭಾರತ 60 ಪದಕಗಳನ್ನು ಬಾಚಿಕೊಂಡಿದೆ. 9ನೇ ದಿನವಾದ ಇಂದು ರೋರಲ್​ ಸ್ಕೇಟಿಂಗ್​, ಟೇಬಲ್​ ಟೆನಿಸ್,​ ಸ್ಟೀಪಲ್​ಚೇಸ್‌ನಲ್ಲಿ ಪದಕಗಳು ಬಂದಿವೆ. ಸಂಜೆ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಳ್ಳಿ ಮತ್ತು 4×400 ಮೀ ಮಿಶ್ರ ತಂಡ ಬೆಳ್ಳಿ ಗೆದ್ದುಕೊಂಡಿತು.ಇನ್ನು ಹತ್ತು ಪದಕ ಗೆದ್ದರೆ ಕಳೆದ ಬಾರಿಯ ದಾಖಲೆ ಮುರಿಯಲಿದೆ. 2018ರಲ್ಲಿ ಒಟ್ಟಾರೆ 70 ಪದಕಗಳನ್ನು ಭಾರತೀಯ ಅಥ್ಲೀಟ್‌ಗಳು ಗೆದ್ದಿದ್ದರು. […]