ಚೆಸ್ ಆಟ ಮಕ್ಕಳ ಬೌದ್ಧಿಕ ಮಟ್ಟ ಚುರುಕಾಗಿಸುತ್ತದೆ: ರಾಜಗೋಪಾಲ ಶೆಣೈ
ಉಡುಪಿ: ಚೆಸ್ ಆಟ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾಗುವ ಏಕಾಗ್ರತೆ, ಸಮಯದ ನಿರ್ವಹಣೆ ಹಾಗೂ ತಂತ್ರಗಾರಿಕೆಯನ್ನು ಕಲಿಸಿಕೊಡುತ್ತದೆ. ಮಕ್ಕಳ ಬೌದ್ಧಿಕ ಮಟ್ಟವನ್ನು ಚುರುಕಾಗಿಸಲು ಚೆಸ್ ಸಹಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಚೆಸ್ ಸಂಘದ ಅಧ್ಯಕ್ಷ ಡಾ. ಕೆ. ರಾಜಗೋಪಾಲ ಶೆಣೈ ಹೇಳಿದರು. ಅವರು ಶನಿವಾರ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜು ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಒತ್ತಡ ನಿರ್ವಹಣೆಗೆ ಚೆಸ್ ಆಟ ಪೂರಕವಾಗಿದ್ದು, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಂಡಲ್ಲಿ […]