ಚೆಸ್‌ ವಿಶ್ವಕಪ್‌ ಫೈನಲ್‌: ನಾಳೆ 2ನೇ ಫೈಟ್​, ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ

ಬಾಕು (ಅಜರ್‌ಬೈಜಾನ್‌): ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 35 ನಡೆಗಳ ನಂತರ ಪಂದ್ಯ ಡ್ರಾ ಕಂಡಿದೆ. ನಾಳೆ ಎರಡನೇ ಕ್ಲಾಸಿಕಲ್ ಪಂದ್ಯ ನಡೆಯಲಿದೆ. ಇದರ ಫಲಿತಾಂಶದ ಮೂಲಕ ಪಂದ್ಯ ಟೈಬ್ರೇಕರ್​ನತ್ತ ಹೋಗಲಿದೆಯೇ ಎಂಬುದು ನಿರ್ಧಾರವಾಗಲಿದೆ.ಇಲ್ಲಿ ಇಂದಿನಿಂದ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ನ ಮೊದಲ ಪಂದ್ಯವನ್ನು ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಡ್ರಾ ಮಾಡಿಕೊಂಡಿದ್ದಾರೆ.ಅಜರ್‌ಬೈಜಾನ್​ ದೇಶದ ಬಾಕುವಿನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್.ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವಣ ಫೈನಲ್‌ನ […]