ಬಾಬರ್, ಶಕೀಲ್​ ಅರ್ಧಶತಕ; ಹರಿಣಗಳಿಗೆ 271 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಪಾಕಿಸ್ತಾನ : ವಿಶ್ವಕಪ್​ ಕ್ರಿಕೆಟ್​​

ಚೆನ್ನೈ (ತಮಿಳುನಾಡು): ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ಸೌದ್​​ ಶಕೀಲ್​ ಅವರ ಅರ್ಧಶತಕದ ನೆರವಿನಿಂದ 46.3 ಓವರ್​ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 270 ರನ್​ ಗಳಿಸಿತು.ಚೆನ್ನೈನ ಚೆಪಾಕ್​ ಪಿಚ್​​ನಲ್ಲಿ ಇಂದು ತಬ್ರೈಜ್ ಶಮ್ಸಿ ಅವರ ಸ್ಪಿನ್​ ದಾಳಿಯ ನಡುವೆಯೂ ಪಾಕಿಸ್ತಾನ ಹರಿಣಗಳಿಗೆ 271 ರನ್​ ಗುರಿ ನೀಡಿತು. ಮೈದಾನಕ್ಕಿಳಿದ ಪಾಕ್​ ಆರಂಭಿಕರಿಗೆ ಮಾರ್ಕೊ ಜಾನ್ಸೆನ್ ಕಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್​ ಆಡಿದ್ದ ಅಬ್ದುಲ್ಲಾ ಶಫೀಕ್ ಕೇವಲ 9 ರನ್​ಗೆ […]